Click Here / English

ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯಕ್ಕೆ ಸ್ವಾಗತ

ಸುತ್ತೋಲೆಗಳು

Teachers’ Day Celebration

ಡಾll ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯವು ಸೆಪ್ಟಂಬರ್,1980 ರಲ್ಲಿ ಸ್ಥಾಪನೆಯಾಗಿದೆ. ಇದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಶಾಶ್ವತ ಅನಮೋದನೆಯನ್ನು ಹೊಂದಿರುವ ಅನುದಾನಿತ ಶಿಕ್ಷಣ ಸಂಸ್ಥೆಯಾಗಿದೆ. ಇದು ಮಾಧ್ಯಮಿಕ ಶಾಲಾ ಶಿಕ್ಷಕರಿಗೆ ಸೇವಾಪೂರ್ವ ತರಬೇತಿಯನ್ನು ನೀಡುತ್ತಾ ಬಂದಿದೆ. ನಮ್ಮ ಕಾಲೇಜಿನಲ್ಲಿ 6 ಜನ ಬೋಧಕ ಸಿಬ್ಬಂದಿಯವರಿದ್ದು, ಅವರಲ್ಲಿ ಮೂವರು ಪಿ.ಹೆಚ್ ಡಿ. ಪದವಿ ಪಡೆದಿರುತ್ತಾರೆ. ಪ್ರಸ್ತುತ ಇಬ್ಬರು ಪಿ.ಹೆಚ್ ಡಿ. ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಎಲ್ಲ ಬೋಧಕ ಸಿಬ್ಬಂದಿಯವರು ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದು ಸೇವಾಪೂರ್ವ ತರಬೇತಿಯಲ್ಲಿ ನವೀನ ಪದ್ದತಿಗಳನ್ನು ಅಳವಡಿಸಿಕೊಂಡಿದ್ದಾರೆ. ಅರ್ಹ ಗ್ರಂಥಪಾಲಕರನ್ನು ಒಳಗೊಂಡಂತೆ  ಹತ್ತು ಜನ ಬೋಧಕೇತರ ಸಿಬ್ಬಂದಿಯನ್ನು ನಮ್ಮ ಕಾಲೇಜು ಹೊಂದಿದೆ. ನಮ್ಮ ಸಂಸ್ಥೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯ, ರಾಷ್ಟ್ರೀಯ ಮುಕ್ತ ಶಾಲೆ (D.El.Ed) ಗಳ ಅಧ್ಯಯನ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾಲೇಜು ವಿಶಾಲವಾದ ಸುಸಜ್ಜಿತ ಕಟ್ಟಡವನ್ನು ಒಳಗೊಂಡಿದೆ ಮತ್ತು ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬೊರೇಟರಿ, ಅಂತರ್ಜಾಲ ಸೌಲಭ್ಯ, ಭಾಷಾ ಪ್ರಯೋಗಾಲಯ, ಆರೋಗ್ಯ ಕೇಂದ್ರ, ಸಭಾಂಗಣ ಗಳನ್ನು ಒಳಗೊಂಡಿದೆ. ಒಳಾಂಗಣ ಮತ್ತು ಹೊರಾಂಗಣ ಆಟಗಳಿಗೆ ಸೂಕ್ತ ಸೌಲಭ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಪ್ರತಿವರ್ಷವೂ ಕೂಡ ಉತ್ತಮ ತರಬೇತಿ ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಫಲಿತಾಂಶ ತಂದಿರುತ್ತಾರೆ.

                                            ಡಾ. ಅಮ್ತುಲ್ ಹಸೀಬ್ ವಜೀಹಾ

                                ಪ್ರಾಂಶುಪಾಲರು

 

ಆಡಳಿತ ಮಂಡಳಿ

ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರು ಡಾ.ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಸಮಾಜದ ದುರ್ಬಲ ವರ್ಗದವರಿಗೆ ಶಿಕ್ಷಣವನ್ನು ತಲುಪಿಸಲು ಅವರು ಮುಖ್ಯವಾಗಿ ಕಾರಣರಾಗಿದ್ದಾರೆ

ಪ್ರವೇಶ

ಬಿ.ಎಡ್ (ಕರ್ನಾಟಕ ಸರ್ಕಾರದ) ಗೆ ಕೇಂದ್ರೀಕೃತ ದಾಖಲಾತಿ ಘಟಕದ ಹಂಚಿಕೆಯ ಪ್ರಕಾರ ಪ್ರವೇಶ ನಡೆಸಲಾಗುತ್ತದೆ 

ನ್ಯಾಕ್ - ಎಕ್ಯೂಎಆರ್ ದಾಖಲೆಗಳು

ಮಾನ್ಯತೆ, ಅನುಮೋದನೆ ಇತ್ಯಾದಿಗಳಿಗೆ ಸಂಬಂಧಿಸಿದ ಎನ್‌ಸಿಟಿಇ ದಾಖಲೆಗಳನ್ನು ಡೌನ್‌ಲೋಡ್ ಮಾಡಿ.

ನಮ್ಮ ಸೌಲಭ್ಯಗಳಲ್ಲಿ ಸುಸಜ್ಜಿತ ಗ್ರಂಥಾಲಯ, ಗಣಿತ ಪ್ರಯೋಗಾಲಯ, ಸಮಾಜ ವಿಜ್ಞಾನ ಪ್ರಯೋಗಾಲಯ ಇತ್ಯಾದಿಗಳು ಸೇರಿವೆ.

ಬಿ.ಎಡ್ (ಕರ್ನಾಟಕ ಸರ್ಕಾರ) ಗೆ ಕೇಂದ್ರೀಕೃತ ದಾಖಲಾತಿ ಘಟಕದ ಹಂಚಿಕೆಯ ಪ್ರಕಾರ ಪ್ರವೇಶ ಪಡೆಯಲಾಗುತ್ತದೆ 

ಸಾಂಸ್ಕೃತಿಕ ಕಾರ್ಯಕ್ರಮಗಳು 2019-20

ಡೌನ್‌ಲೋಡ್‌ಗಳು

"2019-20ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಮುಂದುವರೆದಿದೆ

ಭವಿಷ್ಯದ ನಾಯಕರನ್ನು ಸೃಷ್ಟಿಸಲಾಗುತ್ತಿದೆ

ವಿದ್ಯಾರ್ಥಿಗಳ ಕಾರ್ನರ್

ಇತ್ತೀಚಿನ ಸುದ್ದಿ ಮತ್ತು ಘಟನೆಗಳು